Saturday, February 6, 2010

Ale-aleyalondu birugaali

ಮೃದುವಾದ ಅಲೆಯೊಂದು, ಅಲೆ ಅಲೆಯಾಗಿ ಬಳಿ ಬಂದು
ಕರೆದೊಯ್ಯಿತು ನನ್ನನ್ನು ಆಗಸಕ್ಕೆ
ಮೋಡಗಳ ಬಡಿಗಟ್ಟಿ, ಸರೋವರಗಳ ಹಿಂದಟ್ಟಿ
ಕರೆತಂತು ನನ್ನನ್ನು ಪರದೇಶಕ್ಕೆ

ಎತ್ತ ನೋಡಿದರತ್ತ ಇಟ್ಟಿಗೆಗಳ ಪೆಟ್ಟಿಗೆ
ಕಾಣದಾಗಿದೆ ಎಲ್ಲಿಯೂ ಜನದಬ್ಬರ
ಯಾವ ಶಬ್ಧವೂ ಇಲ್ಲಿಲ್ಲ ಪಿಸುಗುಡಲು ಮೆಲ್ಲಗೆ
ಕೇಳಲಾದರೂ ಇಲ್ಲಿಲ್ಲ ಜನ ಹತ್ತಿರ

ಇಲ್ಲಿಹರು ನಮ್ಮವರು ಜನ ಸಾವಿರಾರು
ಆದರೆ ಯಾರಿಗೆ ಯಾರುಂಟು ಯಾರಿಲ್ಲ
ಬದಲಾಗಲು ಇಲ್ಲಿ ಬದುಕಿನ ನಿತ್ಯ ಕಾರುಬಾರು
ಜನಜನತೆಯ ನಡು ಪ್ರೀತಿ ಕಾಣದಲ್ಲ

ಹಕ್ಕಿಯಾಗಲು ಬಯಸಿ ಹಾರಿ ಬಂದೆನು ನಾನು
ಪ್ರೀತಿಪಾತ್ರರನೆಲ್ಲ ದೂರ ಬಿಟ್ಟು
ಕತ್ತರಿಸಿದಂತಾಗಿದೆ ನನ್ನ ಈ ರೆಕ್ಕೆಯನು
ಹಾರಲಾಗದೆ ಕುಳಿತಿರುವೆನು ಪಟ್ಟು ಬಿಟ್ಟು

ರೆಕ್ಕೆಪುಕ್ಕವಿರುವ ಪುಟ್ಟ ಪಕ್ಷಿಯಲ್ಲ ನಾನು
ಈ ಸತ್ಯದ ನನಗೆ ಅರಿವಿಲ್ಲವೇಕೆ?
ನನ್ನೊಳಗಿನ ಬಿರುಗಾಳಿಯನು ನಾನೇ ತದೆದಿಟ್ಟಿರುವೆನು
ಹಾರಾಡಲು ಶತಸಿದ್ಧ ಇನ್ನಿಲ್ಲ ಶಂಕೆ

3 comments:

  1. This comment has been removed by the author.

    ReplyDelete
  2. this wil make jayanth kaykini proud!!

    ReplyDelete
  3. Glad you shared your blog Supriya..
    Very creative writing style.

    ReplyDelete

Thank you for reading through the blog post. I am thankful for posting your valuable commments and encouragement.