Monday, June 21, 2010

ಸಂಜಯ ರಾಗ

ಸಂಜಯ ರಾಗವು ಬಲು ಮಧುರ
ಬಾನಲಿ ಹೊನಲಿನ ಚಿತ್ತಾರ
ಸಂಜಯ ರಾಗವು ಬಲು ಮಧುರ

ತಂಗಾಳಿಯು ಬೀಸಲು ಮೃದುವಾಗಿ
ಹಕ್ಕಿಯ ಚಿಲಿಪಿಲಿ ನಾದವಾಗಿ
ಉರಿಯುವ ಸೂರ್ಯನು ತಂಪ ಬಯಸುವ
ಉರಿಯುವ ಸೂರ್ಯನು ತಂಪ ಬಯಸುವ
ಮೆದು ಉಸಿರಲಿ ಧರೆಗಿಳಿದು ಬರುವ
ಸಂಜಯ ರಾಗವು ಬಲು ಮಧುರ

ಹಕ್ಕಿಯು ಹೊರಟಿದೆ ಸೇರಲು ಗೂಡ
ಗಿಡ ಮರ ಕೂಗಿ ಕರೆದಿದೆ ಕೂಡ
ಎಲ್ಲರೂ ಸೇರಿ ಕೂಡಿ ನಲಿಯುವ
ಎಲ್ಲರೂ ಸೇರಿ ಕೂಡಿ ನಲಿಯುವ
ಈ ಸುಂದರ ಸಂಜೆಯ ಹೊನ್ನಾಗಿಸುವ
ಸಂಜಯ ರಾಗವು ಬಲು ಮಧುರ

1 comment:

  1. ಸಂಜೆಯ ತಂಪು, ತಂಪಿಗೆ ಯಾರೋ ರಾಗ ಹಾಕಿದಂತೆ ಬಿಸೋ ಗಾಳಿ,
    ಎಲ್ಲಿಗೋ ಮೆರವಣಿಗೆ ಮಾಡೋ ಹಕ್ಕಿಗಳು, ಯಾರೋ ಬರೆದ ಚಿತ್ತಾರಕ್ಕೆ ಬಣ್ಣ ತುಂಬುವ ಬಾನು,ಬೆಳದಿಂಗಳಿಗಾಗಿ ತನ್ನತನವ ಬಿಡುವ ರವಿ,ಎಲ್ಲಾ ಸುಂದರ.
    ನೋಡುವ ಮನಸ್ಸು, ಕ್ಷಣದಲ್ಲಿ ಎಲ್ಲಾ ಮರೆತ ಮಗುವಂತೆ.!
    ಸಂಜಯ ರಾಗ ಚೆನ್ನಾಗಿದೆ.
    ನಿಮ್ಮವ,
    ರಾಘು.

    ReplyDelete

Thank you for reading through the blog post. I am thankful for posting your valuable commments and encouragement.